ಶಾಲೆಯ ವಿಷನ್ (ಕಾಣ್ಕೆ)

ರಾಷ್ಟ್ರೀಯ ಶಿಕ್ಷಣ ನೀತಿ 1986ರನ್ವಯ ಅನೇಕ ಸ್ತರಗಳಲ್ಲಿ ಹೊಸ ಚಿಂತನೆಯನ್ನು ಪ್ರಾರಂಭಿಸಿತು. 6 ರಿಂದ 14ವರ್ಷದೊಳಗಿನ ಎಲ್ಲಾ ಮಕ್ಕಳು ಶಾಲೆಯಲ್ಲಿರಬೇಕು ಹಾಗೂ ಶಾಲೆಗೆ ಸೇರ್ಪಡೆಯಾದ ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸಕ್ಕಾಗಿ ಸಕರ್ಾರದ ಬದ್ಧತೆ ಇರಬೇಕು ಎಂಬ ಎರಡು ಅಯಾಮಗಳನ್ನು ಗುರುತಿಸಲಾಗಿದೆ. ರಾಜ್ಯ ಮಟ್ಟದ ನಿಧರ್ಾರ ತೆಗೆದುಕೊಳ್ಳುವಾಗ ಗುಣಮಟ್ಟದ ಕಲಿಕೆ ಮಟ್ಟವನ್ನು ಗುರುತಿಸಲು ರಾಜ್ಯ ಮಟ್ಟದಲ್ಲಿ ಮೌಲ್ಯಾಂಕನ ಆಗಬೇಕು ಎಂಬ ಪ್ರಸ್ತಾವನೆಯನ್ನು ಕನರ್ಾಟಕ ರಾಜ್ಯ ಸಕರ್ಾರವು 2003ರಲ್ಲಿ ಮಂಡಿಸಿತ್ತು. ಇದರ ಅನುಸಾರವಾಗಿ 2005 ರಿಂದ ಕನರ್ಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆ ಕಾರ್ಯ ಪ್ರಾರಂಭಿಸಿತು. 2010-11ನೇ ಸಾಲಿನಲ್ಲಿ ಕೆ.ಎಸ್.ಕ್ಯು.ಎ.ಓ. ತನ್ನ ರೂಪರéೇಗಳನ್ನು ಮಾರ್ಪಡಿಸಿಕೊಂಡು NAAC (National Assessment and Accrediation Council) ಮಾದರಿಯಲ್ಲಿ Karnataka School Quality Assessment and Accrediation Council (K.S.Q.A.A.C) ಆಗಿ ತನ್ನ ರೂಪರೇಷೆ ಹಾಗೂ ಕಾರ್ಯವ್ಯಾಪ್ತಿಯಲ್ಲಿ ಆಗಾಧವಾದ ಬದಲಾವಣೆ ಮಾಡಿಕೊಂಡಿದೆ.

ಪ್ರಯುಕ್ತ ಶಾಲಾ ಹಂತದಲ್ಲಿನ ಕೊರತೆಗಳನ್ನು ನೀಗಿಸಲು ಶಾಲಾ ಶೈಕ್ಷಣಿಕ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ಇದು ಶಾಲಾ ಹಂತದಲ್ಲಿ ಮಕ್ಕಳ ಸರ್ವತೋಮುಖ ಶೈಕ್ಷಣಿಕ ಅಭಿವೃದ್ಧಿಗಾಗಿ ಸಿದ್ಧಪಡಿಸಿದ ಯೋಜನೆಯಾಗಿದೆ. ಶಾಲಾ ಹಂತದಲ್ಲಿ ಮಕ್ಕಳ ಕಲಿಕಾ ದೋಷ/ಕೊರತೆಗಳ ನಿವಾರಣೆಗಾಗಿ ಶಿಕ್ಷಕರು ಸೇತುಬಂಧ ಹಾಗೂ ಪರಿವಾರ ಬೋಧನೆ, ಕ್ರಿಯಾಸಂಶೋಧನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ನಮ್ಮ ಶಾಲೆಯ ಶಿಕ್ಷಕರು ಈ ಕಾರ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯ ಕ್ರಮಕೈಗೊಳ್ಳಲಾಗಿದೆ. ಇದರ ಮೂಲಕ ಕಲಿಕಾ ಕೊರತೆಯನ್ನು ತುಂಬಲು ಕಂಪ್ಯೂಟರ್ ಶಿಕ್ಷಣ ಹಾಗೂ ಸರಳ ಪ್ರಾಯೋಗಿಕ ಪಾಠೋಪಕರಣಗಳ ಬಳಕೆಯ ಮೂಲಕ ನಾವಿನ್ಯತೆ ಶಿಕ್ಷಣ ನೀಡುತ್ತಿದ್ದು ಮಗು ಶಾಲೆಗೆ ನಗು ನಗುತ್ತಾ ಬರಲು ಭೌತಿಕವಾಗಿ ಉತ್ತಮ ಪರಿಸರಕ್ಕೆ ವಿಶೇಷ ಒತ್ತನ್ನು ನೀಡಲಾಗಿದೆ.

X