ಶಾಲಾ ಮಾಹಿತಿ

ನಮ್ಮ ನಾಡಿನ ವಿವಿಧ ಜಿಲ್ಲೆಗಳಲ್ಲಿ ಒಂದಾದ ಕೊಪ್ಪಳಜಿಲ್ಲೆಯು ತನ್ನದೆ ಆದ ಐತಿಹಾಸಿಕ ಶ್ರೀಮಂತಿಕೆಯ ಪರಂಪರೆ ಹೊಂದಿದ್ದು ಹಾಗೂ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರಮಠ ಈ ನಾಡಿಗೆ ಚಿರ ಪರಿಚಿತವಾದದ್ದಾಗಿದೆ. ಪರಮಪೂಜ್ಯರಾದ ಲಿಂ.ಶ್ರೀ.ಮ.ನಿ.ಪ್ರ.ಜ.ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರು ಭಕ್ತರಿಗಾಗಿ ಈ ನಾಡಿನ ಜನತೆಯ ಕಲ್ಯಾಣಕ್ಕಾಗಿ ಹಗಲಿರುಳು ಶ್ರಮಿಸಿದರು. ಅನ್ನ ದಾಸೋಹದ ಜೊತೆಗೆ ಜ್ಞಾನ ದಸೋಹವು ನಡೆಯಲೆಂದು ಕೊಪ್ಪಳದಲ್ಲಿ ಹಾಗೂ ಕುಕನೂರಿನಲ್ಲಿ ಮತ್ತು ಹಲವಾರುಕಡೆಗೆ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿದ್ದು ಈ ನಾಡಿನ ಜನತೆಗೆ ಭಾಗ್ಯದ ಬಾಗಿಲನ್ನೆತೆರೆದೆಂತಾಗಿದೆ.

ಈ ಕಾರ್ಯವನ್ನು ಪೂಜ್ಯರಾದ ಲಿಂ.ಶ್ರೀ.ಮ.ನಿ.ಪ್ರ.ಜ.ಶ್ರೀ ಶಿವಶಾಂತವೀರ ಮಹಾಸ್ವಾಮಿಗಳವರು ವಿಸ್ತಾರಗೊಳಿಸುತ್ತಾ ಹೆಚ್ಚು ಶಿಕ್ಷಣ ಸಂಸ್ಥೆಗಳನ್ನು ಮುನ್ನೆಡೆಸುತ್ತಾ ಬಂದಿದ್ದು ನಮ್ಮೆಲ್ಲರ ಭಾಗ್ಯ. ಪರಮಪೂಜ್ಯ ಶ್ರೀ.ಮ.ನಿ.ಪ್ರ.ಜ. ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರು ಮಠದ ಅಭಿವೃದ್ಧಿಅಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನೆ ಮಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯ ಯಲಬುಗರ್ಾ ತಾಲೂಕದಲ್ಲಿಯೇ ಕುಕನೂರು ಐತಿಹಾಸಿಕ ಶ್ರೀಮಂತಿಕೆಯ ಪರಂಪರೆಯನ್ನು ಹೊಂದಿರುವ ಹಿರಿದಾದ ಊರಾಗಿದೆ.ಈ ಹಿಂದೆ ಕುಂತಳನಗರವೆಂದು ಪ್ರಸಿದ್ದಿ ಪಡೆದ ಸ್ಥಳವಾಗಿತ್ತು.ಈ ಗ್ರಾಮದಲ್ಲಿ ಅಧಿದೇವತೆಯಾದ ಶ್ರೀ ಮಹಾಮಾಯೆದೇವಿ ದೇವಸ್ಥಾನವು ಬಹಳ ಪ್ರಸಿದ್ಧವಾಗಿದೆ ಇಲ್ಲಿಯ ಅನೇಕ ಶಾಸನಗಳಲ್ಲಿಯ ವಿಷಯವನ್ನು ಬಲ್ಲವರು ಹೇಳಿದಂತೆ ಆಗಿನ ಕಾಲದಲ್ಲಿ ಕುಕನೂರ ವಿದ್ಯೆಯ ಆಗರವಾಗಿತ್ತಂತೆ.

1958ರಕ್ಕಿಂತ ಪೂರ್ವದಲ್ಲಿ ಶೈಕ್ಷಣಿಕ ಸೌಲಭ್ಯದಿಂದ ವಂಚಿತವಾಗಿದ್ದ ಊರು ಆಗ ನಮ್ಮ ಗ್ರಾಮದಲ್ಲಿ ಒಂದು ಸರಕಾರಿ ಮಾಧ್ಯಮಿಕ ಶಾಲೆ ಮತ್ತು ವಿದ್ಯಾನಂದ ಗುರುಕುಲ ಪ್ರೌಢ ಶಾಲೆ ಮಾತ್ರ ಇತ್ತು. ನಮ್ಮ ಗ್ರಾಮದ ಮಕ್ಕಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಪ್ರೌಢಶಾಲೆಯಲ್ಲಿ ಓದಲು ಇನ್ನೂ ಒಂದು ಪ್ರೌಢಶಾಲೆ ಅವಶ್ಯಕತೆ ಇತ್ತು. ಇದನ್ನರಿತ ಕುಕನೂರಿನ ನಾಗರಿಕರು ಸೇರಿಕೊಂಡು ಶಿಕ್ಷಣ ಸಮಿತಿಯನ್ನು ರಚಿಸಿದರು. ಈ ಶಿಕ್ಷಣ ಸಮಿತಿಯವರು ಹಲವಾರು ಬಾರಿ ಸರಕಾರಕ್ಕೆ ಮನವಿ ಮಾಡಿಕೊಂಡು ಪ್ರೌಢಶಾಲೆಯ ಅವಶ್ಯಕತೆ ಇರುವದನ್ನು ಆಗಿನ ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟರು. ನಂತರ ಆಗಿನ ಘನ ಸರಕಾರವು ಇವರ ಮನವಿಗೆ ಸ್ಪಂದಿಸಿ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿಯೆ 8ನೇ ತರಗತಿಯನ್ನು ತೆರೆಯಲು ಅನುಮತಿ ಕೊಟ್ಟಿತು. ಆ ನಂತರ ಅಂದಿನ ಸರಕಾರದ ಶಿಕ್ಷಣ ಸಚಿವರಾದ ಮಾನ್ಯಶ್ರೀ ಅಣ್ಣಾರಾವ ಗುಣಮುಖಿ ಹಾಗೂ ಕೊಪ್ಪಳದ ಶಾಸಕರಾಗಿದ್ದ ಶ್ರೀಯುತ ಎಮ್.ಎಸ್.ಪಾಟೀಲರೊಡನೆ ಕುಕನೂರಿಗೆ ಆಗಮಿಸಿ 07-07-1958ರಂದು 8ನೇ ತರಗತಿಯನ್ನು ಉದ್ಘಾಟಿಸಿದರು. ಈ ಊರಿನಲ್ಲಿ ಶೈಕ್ಷಣಿಕ ಮಟ್ಟ ಬೆಳೆಯಲಿಕ್ಕೆ ಅನುವುಮಾಡಿಕೊಟ್ಟರು.

ಮುಂದೆ 1959-60ರಲ್ಲಿ 9ನೇ ತರಗತಿ 1960-61ರಲ್ಲಿ 10ನೇತರಗತಿಗಳು ಪ್ರಾರಂಭವಾದವು 1961ರಲ್ಲಿ ಹೆಚ್.ಎಸ್.ಸಿಯ ತಂಡವು ಉತ್ತೀರ್ಣಹೊಂದಿ ಹೊರಬಂದಿದ್ದು ಶಿಕ್ಷಣ ಸಮಿತಿಯವರು ಸ್ಥಾಪಿಸಿದ ಅನುದಾನಿತ ಪ್ರೌಢಶಾಲೆಯನ್ನು ಸರಕಾರಿ ಮಾಧ್ಯಮಿಕ ಶಾಲೆಯಲ್ಲಿಯೇ ಸಮಿತಿಯವರು ಮುನ್ನಡೆಸಿಕೊಂಡು ಬಂದರು.

ಜುಲೈ 1958ರಿಂದ 1964ನೇ ಜೂನ್ ವರೆಗೆ ಅನುದಾನಿತ ಪ್ರೌಢಶಾಲೆಯನ್ನು ಸ್ಥಳೀಯ ಶಿಕ್ಷಣಸಮಿತಿಯವರು ಬಡ ವಿದ್ಯಾಥರ್ಿಗಳಿಗೆ ಕಲಿಯಲಿಕ್ಕೆ ಅನುವುಮಾಡಿಕೊಟ್ಟರು. ಕಾರ್ಯದಶರ್ಿ ಶ್ರೀ ಸಂಗಪ್ಪ ಮುಟಗಿ ಈ ಸಂಸ್ಥೆ ಯವುದೇಕಾರಣಕ್ಕೂ ನಿಲ್ಲಬಾರದೆಂದು ಎಲ್ಲಾ ಮಕ್ಕಳಿಗೆ ಶಿಕ್ಷಣ ಸರಳವಾಗಿ ದೊರೆಯುವಂತಾಗಬೇಕು ಎಂಬ ಸದುದ್ದೇಶದಿಂದ ಸಮಿತಿ ಅವರೊಂದಿಗೆ ಚಚರ್ಿಸಿ ಸದರಿಯವರು ಪ್ರಾರಂಭಿಸಿದ ಪ್ರೌಢಶಾಲೆಯ ಆಡಳಿತವನ್ನು 1964ನೇ ಜೂನ್ ತಿಂಗಳಿಲ್ಲಿ .ಶ್ರೀ.ಮ.ನಿ.ಪ್ರ.ಜ.ಶ್ರೀ ಅನ್ನದಾನೇಶ್ವರ ಮಹಾಸ್ವಾಮಿಗಳವರು ಮುಂಡರಗಿ ಇವರ ದಿವ್ಯಸಾನಿಧ್ಯದಲ್ಲಿ. ಶ್ರೀ.ಮ.ನಿ.ಪ್ರ.ಜ.ಶ್ರೀ ಮರಿಶಾಂತವೀರ ಮಹಾಸ್ವಾಮಿಗಳವರು ಸಂಸ್ಥಾನ ಶ್ರೀ ಗವಿಮಠ ಕೊಪ್ಪಳ ಇವರ ದಿವ್ಯಸನ್ನಿಧಿಗೆ ಒಪ್ಪಸಿದರು. ಗವರ್ನಮೆಂಟ್ ಎಡೆಡ್ ಹೈಸ್ಕೂಲ್ ಎಂಬ ಹೆಸರಿನ ಬದಲಾಗಿ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ ಕುಕನೂರ ಎಂದು ಮರು ನಾಮಕರಣ ಹೊಂದಿತು. ಈಗ ನಮ್ಮ ಕುಕನೂರಿನ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆ ನಮ್ಮ ನಾಡಿನಲ್ಲಿ ಹೆಸರುವಾಸಿಯಾಗಿದೆ.

ಪೂಜ್ಯರ ಒಡೆತನಕ್ಕೆ ಬಂದನಂತರ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ಮುಖ್ಯಗುರುಗಳಾಗಿ ಶ್ರೀಯುತಎಮ್.ಎಸ್.ಮಳಲಿ ಯವರು ಉತ್ತಮ ಆಡಳಿತ ನಡೆಸಿ ಶಾಲೆ ಅಭಿವೃದ್ಧಿಗಾಗಿ ಸೇವೆಸಲ್ಲಿಸಿದರು. ನಂತರ ಹಿರಿಯರುಅನುಭವಿಗಳಾದ ಕೊಪ್ಪಳದ ಶ್ರೀ ಬಿ.ಸಿ.ಪಾಟೀಲರು ಮುಖ್ಯಗುರುಗಳಾಗಿ ಮತ್ತು ಉತ್ಸಾಹಿಗಳು ಅನುಭವಿ ಶಿಕ್ಷಕ ಬಳಗದಿಂದ ಶಾಲೆಯ ವಿದ್ಯಾಭ್ಯಾಸದ ಗುಣಮಟ್ಟ ಸುಧಾರಣೆ ಮಾಡುತ್ತಾ ವಿದ್ಯಾಥರ್ಿಗಳ ಸಂಖ್ಯೆಯನ್ನು ಹೆಚ್ಚಿಸಿದರು ಇವರ ಸೇವೆಯು ಸ್ಮರಣೀಯವಾಗಿದೆ ಶಾಲೆಯ ಸ್ವಂತ ಕಟ್ಟಡದ ನಕಾಶೆ ತಯಾರಿಸಿದರು.ನಂತರ ಶ್ರೀ ಕೆ.ಬಿ.ಬ್ಯಾಳಿಯವರು 1976 ರಲ್ಲಿ ಈ ಶಾಲೆಯ ಮುಖ್ಯಗುರುಗಳಾಗಿ ಸೇವೆ ಪ್ರಾರಂಭಿಸಿದರು.ಸ್ವಂತದ್ದಾದ ಹೊಸ ಕಟ್ಟಡ ನಿಮರ್ಾಣ ಅಲ್ಲದೆ ಬಾಲವಾಡಿಯಿಂದ 7ನೇ ತರಗತಿ ವರೆಗೆ ಹಿರಿಯ ಪ್ರಾಥಮಿಕ ಶಾಲೆಯನ್ನು ಪಾರಂಭಿಸಿದರು. ಇವರ ಕರ್ತವ್ಯನಿಷ್ಟೆಯಿಂದ ಮತ್ತು ಉತ್ತಮ ಶಿಕ್ಷಕ ವೃಂದದಿಂದ ಶಾಲೆಯ ಕೀತರ್ಿ ಯಲಬುಗರ್ಾ ತಾಲೂಕಿನಲ್ಲಿ ಅಲ್ಲದೆ ಆಗಿನ ರಾಯಚೂರ ಜಿಲ್ಲೆಯಲ್ಲಿ ಉತ್ತಮ ಪ್ರೌಢಶಾಲೆ ಎಂದು ಹೆಸರು ಪಡೆಯಿತು.

ಶ್ರೀ ಕೆ.ಬಿ.ಬ್ಯಾಳಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರಕಿತು.1984ರಲ್ಲಿ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ರಜತೋತ್ಸವವನ್ನು ಕೂಡಾ ಆಚರಿಸಲಾಯಿತು.ಇವರ ನಿವೃತ್ತಿ ನಂತರ 31-03-2003 ರಿಂದ ಮುಖ್ಯಗುರುಗಳಾಗಿ ಶ್ರೀ ಗವಿಸಿದ್ದಪ್ಪ ಚಲವಾದಿ ಅಧಿಕಾರ ವಹಿಸಿಕೊಂಡರು ಇವರ ಆಡಳಿತಾವದಿಯಲ್ಲಿ ತರುಣ ಉತ್ಸಾಹಿಗಳು ಹಾಗೂ ಅನುಭವಿ ಶಿಕ್ಷಕವೃಂದದಿಂದ ಶಾಲೆಯ ವಿದ್ಯಾಭ್ಯಾಸದ ಮಟ್ಟ ಎಸ್.ಎಸ್.ಎಲ್.ಸಿಯ ಉತ್ತಮ ಫಲಿತಾಂಶವು ಮುಂದುವರೆಯುತ್ತಾ ಸಾಗಿದೆ.

ಮಕ್ಕಳ ಸವಾರ್ಂಗೀಣ ಅಭಿವೃದ್ಧಿಯೇ ಮುಖ್ಯ ಧ್ಯೇಯವಾಗಿರುವದರಿಂದ ಮಾಸಿಕ ಪರೀಕ್ಷೆ, ಘಟಕ ಪರೀಕ್ಷೆ,ವಿಶೇಷ ತರಗತಿಗಳು,ಕಲಿಕೆಯಲ್ಲಿ ಹಿಂದುಳಿದ ಮಕ್ಕಳಬಗ್ಗೆ ವಿಶೇಷ ಕಾಳಜಿವಹಿಸಿ ಶಿಕ್ಷಣಕ್ಕೆ ಪೂರಕವಾದ ಪಠ್ಯ ಮತ್ತು ಪಠ್ಯೇತರ ಚಟುವಟಕೆಗಳಲ್ಲಿ ನಮ್ಮ ಶಾಲೆ ಮಹತ್ತರವಾದ ದಾಪುಗಾಲನ್ನಿಡುತ್ತಾ ಬಂದಿದೆ.

ಶಾಲೆಯು ಆರಂಭವಾದಾಗಿನಿಂದ ಇಂದಿನ ವರೆಗೂ ನಮ್ಮ ಶಾಲೆಯ ವಿದ್ಯಾಥರ್ಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಕೆಗಳಲ್ಲಿ ನಮ್ಮ ಶಾಲೆಯ ಕೀತರ್ಿಯನ್ನು ರಾಜ್ಯಮಟ್ಟದವರೆಗೂ ಬೆಳಗಿಸಿದ್ದಾರೆ.ಕ್ರೀಡಾ ಕ್ಷೇತ್ರದಲ್ಲಿ 2004-05. 05-06. ಹಾಗೂ 06-07ನೇಸಾಲಿನಲ್ಲಿ ಸತತವಾಗಿ 3ಬಾರಿ ಮೈಬೂಬಸಾಬ ಎಮ್ಮಿ ಎಂಬ ವಿದ್ಯಾಥರ್ಿಯು ಸರಪಳಿಗುಂಡು ಎಸೆತ ಸ್ಪಧರ್ೆಯಲ್ಲಿ 2007-08ನೇಸಾಲಿನಲ್ಲಿ ಗವಿಸಿದ್ದಪ್ಪ ಗಡ್ಡಿ ಎಂಬ ವಿದ್ಯಾಥರ್ಿಯು ಉದ್ದಜಿಗಿತದಲ್ಲಿ 2008-09ನೇಸಾಲಿನಲ್ಲಿ ಈರಮ್ಮ ಗ್ಯಾನಪ್ಪ ತೋಟದ ಎಂಬ ವಿದ್ಯಾಥರ್ಿಯು ಗುಂಡುಎಸೆತ ಸ್ಪಧರ್ೆಯಲ್ಲಿ 2011-12ನೇ ಸಾಲಿನಲ್ಲಿ ಸಂತೋಷ ಟಾಕಪ್ಪ ಇಟಗಿ ಎಂಬ ವಿದ್ಯಾಥರ್ಿಯು ಉದ್ದಜಿಗಿತದಲ್ಲಿ ಈ ರೀತಿ ನಮ್ಮಶಾಲೆಯ ವಿದ್ಯಾಥರ್ಿಗಳು ರಾಜ್ಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ನಮ್ಮ ಶಾಲೆಯ ಹಾಗೂ ಸಂಸ್ಥೆಯ ಕೀತರ್ಿ ತಂದಿದ್ದಾರೆ.

ಪ್ರತಿಭಾ ಕಾರಂಜಿಯಲ್ಲಿ 2006-07ನೇ ಸಾಲಿನಲ್ಲಿ ಭಾಷಣ ಸ್ಪಧರ್ೆ ಮತ್ತ ಕವ್ಹಾಲಿ ಸ್ಪಧರ್ೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾರೆ. 2007-08ನೇ ಸಾಲಿನಲ್ಲಿ ಸಾಮೂಹಿಕ ನೃತ್ಯ ಮತ್ತು ಕವ್ಹಾಲಿ ಸ್ಪಧರ್ೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾರೆ. 2009-10ನೇ ಸಾಲಿನಲ್ಲಿ ರಾಷ್ಟ್ರಗೀತೆ ಹಾಡಿನ ಸ್ಪಧರ್ೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾರೆ. 2011-12ಹಾಗೂ 13-14 ರಲ್ಲಿ ಅರೆಬಿಕ್ ಧಾಮರ್ಿಕ ಪಠಣ ಸ್ಪಧರ್ೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮಸ್ಥಾನ ಪಡೆದು ರಾಜ್ಯ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದಾನೆ.ಈ ರೀತಿ ನಮ್ಮ ಶಾಲೆಯ ವಿದ್ಯಾಥರ್ಿಗಳು ರಾಜ್ಯ ಮಟ್ಟದಪ್ರತಿಭಾ ಕಾರಂಜಿಯಲ್ಲಿ ವಿವಿಧ ಸ್ಪಧರ್ೆಯಲ್ಲಿ ನಮ್ಮ ಶಾಲೆಯ ಹಾಗೂ ಸಂಸ್ಥೆಯ ಕೀತರ್ಿ ತಂದಿದ್ದಾರೆ. ಇದೇರೀತಿಯಾಗಿ ರಾಜ್ಯ ಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ನಮ್ಮ ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿ ನಮ್ಮ ಶಾಲೆಯ ಹಾಗೂ ಸಂಸ್ಥೆಯ ಕೀತರ್ಿ ತಂದಿದ್ದಾರೆ.

2008-09ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ.ವಾಷ್ರೀಕ ಪರೀಕ್ಷೆಯಲ್ಲಿ ನಮ್ಮಶಾಲೆ ಪ್ರತಿಶತ 96.20% ಫಲಿತಾಂಶ ಪಡೆದಿರುತ್ತದೆ ಅದರಲ್ಲಿ ಭರತಕಮಾರ ಶಂಕ್ರಪ್ಪ ವರಕನಹಳ್ಳಿ ಎಂಬ ವಿದ್ಯಾಥರ್ಿಯು 594 ಅಂಕಗಳನ್ನು ಪಡೆದು ಶೇಕಡಾ 95.04% ರಷ್ಟು ಫಲಿತಾಂಶ ಪಡೆದು ಕನ್ನಡ ಮಾಧ್ಯಮದಲ್ಲಿ ನಮ್ಮ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಲದೆ ಹಿಂದುಳಿದ ವರ್ಗಗಳ ವಸತಿನಿಲಯದಲ್ಲಿ ಅಭ್ಯಾಸಮಾಡಿದ ವಿದ್ಯಾಥರ್ಿಗಳಲ್ಲಿ ರಾಜ್ಯ ಮಟ್ಟಕ್ಕೆ ಪ್ರಥಮಸ್ಥಾನ ಪಡೆದು ನಮ್ಮ ಶಾಲೆಯ ಹಾಗೂ ಸಂಸ್ಥೆಯ ಕೀತರ್ಿ ತಂದಿದ್ದಾನೆ.

1958ರಲ್ಲಿ ಅನುದಾನಕ್ಕೆ ಒಳಪಟ್ಟ ನಮ್ಮ ಶಾಲೆಯು ಸರಕಾರದ ವಿವಿಧ ಸೌಲಭ್ಯಗಳನ್ನು ಪಡೆಯುತ್ತಿದ್ದು 2006-07ನೇ ಸಾಲಿನಿಂದ 8ನೇ ತರಗತಿ ವಿದ್ಯಾಥರ್ಿಗಳಿಗೆ ಸೈಕಲ್ ವಿತರಣೆ 2007-08ನೇ ಸಾಲಿನಲ್ಲಿ ಮದ್ಯಾಹ್ನದ ಬಿಸಿಊಟ ವಿತರಣೆ 2008-09ನೇ ಸಾಲಿನಿಂದ ಉಚಿತ ಪಠ್ಯಪುಸ್ತಕ ವಿತರಣೆ. 2013-14ನೇ ಸಾಲಿನಿಂದ ಕ್ಷೀರಭಾಗ್ಯ ವಿತರಣೆ ವಿದ್ಯಾಥರ್ಿ ವೇತನ ಮುಂತಾದವುಗಳ ಸೌಲಭ್ಯಗಳನ್ನು ಸರಕಾರದಿಂದ ಪಡೆಯುತ್ತಿದೆ.

ನಮ್ಮ ಪ್ರೌಢಶಾಲೆಯು 2 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಶಾಲೆ ವಿಶಾಲವಾದ ಆಟದ ಮೈದಾನ ಶಾಲಾ ವನ, ಪ್ರಯೋಗಾಲಯ, ಗ್ರಂಥಾಲಯ, ಕ್ರೀಡಾ ವಿಭಾಗ, ಸ್ಕೌಟ್ವಿಭಾಗ, ರಾಷ್ಟ್ರೀಯ ಸೇವಾದಳ, ಚಿತ್ರಕಲಾ ವಿಭಾಗ, ಗ್ರಾಮೀಣ ವಿಜ್ಞಾನ ಕೇಂದ್ರ, ರೆಡ್ ರಿಬ್ಬನ್ ಕ್ಲಬ್, ಇಕೋಕ್ಲಬ್, ವಿದ್ಯಾಥರ್ಿಗಳ ಗ್ರಾಹಕರ ಸಹಕಾರ ಸಂಘ, ಆರೋಗ್ಯ ಕ್ಲಬ್ನಂತಹ ಮುಂತಾದ ವಿಭಾಗಗಳನ್ನು ಹೊಂದಿದ್ದು ಉತ್ತಮ ತರುಣ ಶಿಕ್ಷಕ ಬಳಗ ಸುಸಜ್ಜಿತ ವರ್ಗ ಕೊಠಡಿ ಪ್ರಶಾಂತ ವಾತಾವರಣ ಇರುವದರಿಂದ ಶಾಲೆಯ ವಿದ್ಯಾಥರ್ಿಗಳ ಪ್ರತಿಭೇ ಬೆಳೆಸಲು ಸಹಾಯಕವಾಗಿದೆ. ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾಥರ್ಿಗಳು ಇಂದು ರಾಜ್ಯ ಮಟ್ಟದಲ್ಲಿ ಮತ್ತು ದೇಶ ವಿದೇಶಗಳಲ್ಲಿ ಉನ್ನತ ಹುದ್ದೆ ಪಡೆದು ಶಾಲೆಯ ಕೀತರ್ಿಯನ್ನು ಹೆಚ್ಚಿಸಿದ್ದಾರೆ.

ನಮ್ಮ ಪ್ರೌಢಶಾಲೆಯು ಎಸ್.ಎಸ್.ಎಲ್.ಸಿ. ವಾಷರ್ಿಕ ಪರೀಕ್ಷೆಯಲ್ಲಿ ಸತತವಾಗಿ ಶೇಕಡಾ 90ಕ್ಕಿಂತ ಹೆಚ್ಚು ಫಲಿತಾಂಶ ಪಡೆದು ಅತ್ಯುತ್ತಮ ದಾಖಲೆಯನ್ನು ಸೃಷ್ಟಿಸಿದ್ದರ ಫಲವಾಗಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಿಂದ ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ಸಿಬ್ಬಂದಿ ವರ್ಗದವರನ್ನು ಹೃತ್ಪೂರ್ವಕವಾಗಿ ಸಭಿನಂದಿಸುತ್ತಾ ಶಾಲೆಗೆ ಅಭಿನಂದಾನಾ ಪತ್ರ ನೀಡಿದೆ.

ಪರಮಪೂಜ್ಯರಾದ ಲಿಂ.ಶ್ರೀ.ಮ.ನಿ.ಪ್ರ.ಜ.ಶ್ರೀ ಶಿವಶಾಂತವೀರ ಮಹಾಸ್ವಾಮಿಗಳವರ ಹಾಗೂ ಪ್ರಸ್ತುತ ಪರಮಪೂಜ್ಯ ಶ್ರೀ.ಮ.ನಿ.ಪ್ರ.ಜ.ಶ್ರೀ ಅಭಿನವ ಗವಿಸಿದ್ಧೇಶ್ವರ ಮಹಾಸ್ವಾಮಿಗಳವರ ಕೃಪಾಶಿವರ್ಾದದಿಂದ ಹಾಗೂ ಶ್ರೀ ಗವಿಸಿದ್ಧೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕೊಪ್ಪಳ ಇದರ ಅಧ್ಯಕ್ಷರು ಕಾರ್ಯದಶರ್ಿಗಳು ಹಾಗೂ ಸದಸ್ಯರುಗಳು ಮತ್ತು ಸ್ಥಳೀಯ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರುಗಳ ಪರಿಶ್ರಮ ಮತ್ತು ಮಾರ್ಗದರ್ಶನದಂತೆ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿ ವರ್ಗದವರ ಪರಿಶ್ರಮದ ಫಲವಾಗಿ ನಮ್ಮ ಪ್ರೌಢಶಾಲೆಯು ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಲ್ಲಿ ವರ್ಷದಿಂದ ವರ್ಷಕ್ಕೆ ಪ್ರಗತಿಯನ್ನು ಸಾಧಿಸುತ್ತಾ ಮನ್ನಡೆಯುತ್ತಾ ಸಾಗಿದೆ ಹಾಗೂ ಕುಕನೂರಿನ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ.

X